Bengaluru,28.10.2024
The MADIGA Mahasabha(R)Chitradurga,held a Media Interaction & briefed Press personnel about:
#1)The difficulties faced by members of their community in the various sectors:jobs/employment,quality healthcare,financial,education at school/college levels...
#2)The lack of support:by the State Govt(GoK)-in raising standard of living,easy loans,quality/affordable healthcare,education infra/facilities...
The Committee members@Press Club of Bangalore(PCB)addressing Media
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗೆ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ ಶತಮಾನಗಳಿಂದ ತಳಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಜಾತಿಗಳು ಈ ಸಮಾಜದ ಅನೇಕ ಕಟ್ಟುಪಾಡುಗಳಿಗೆ ಒಳಪಟ್ಟು ತುಳಿತಕ್ಕೆ ಒಳಗಾದ ಹಾಗೂ ಸಮಾಜದಲ್ಲಿ ಅತಿ ಹೆಚ್ಚು ಕಡೆಗಣನೆಗೆ ಒಳಗಾದಂತಹ ಜಾತಿಗಳಾಗಿರುತ್ತವೆ. ಇವು ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಜಾತಿಗಳಾಗಿದ್ದು ಸಮಾಜದ ಎಲ್ಲಾ ಜಾತಿಗಳಿಂದ ನಿರ್ಲಕ್ಷತೆಗೊಳಪಟ್ಟಿವೆ.
ಸಮಾಜದ ಎಲ್ಲಾ ಜಾತಿಗಳಿಂದ ಎಲ್ಲಾ ರೀತಿಯಿಂದಲೂ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತಿ ಹೆಚ್ಚು ಕಡೆಗಣನೆಗೆ ಒಳಗಾಗಿದ್ದು ಇಂದಿಗೂ ಸಹ ಅಸ್ಪರ್ಶವಾಗಿ ಉಳಿದುಕೊಂಡಿದೆ.
ಇದನ್ನು ಮನಗಂಡಂತಹ ಮಾದಿಗ ಸಮಾಜದ ಸಂಘಟನೆಗಳು ತಮಗೆ ಆಗುತ್ತಿರುವ ಅನ್ಯಾಯವನ್ನು ಈಗ್ಗೆ ಸುಮಾರು 30 ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿವೆ. ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಶಾಸಕರು, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಈ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಳಿಕೊಂಡಾಗ್ಯೂ ಯಾವುದೇ ಪ್ರಯೋಜನವಾಗದ ಕಾರಣ ರಾಜ್ಯದಾದ್ಯಂತ ಹೋರಾಟವನ್ನು ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ. ವಿಧಾನಸೌಧ ಮುತ್ತಿಗೆ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ತಾಲ್ಲೂಕು ಕಛೇರಿ ಮುತ್ತಿಗೆ, ಅರಬೆತ್ತಲೆ ಮೆರವಣಿಗೆ, ಉರುಳು ಸೇವೆ, ಶಾಸಕರ, ಸಚಿವರ ಮನೆ ಮುಂದೆ ಧರಣಿ, ಮುಖ್ಯಮಂತಿಗಳಿಗೆ ಫೆರಾವು ಹಾಗೂ ಬೆಳಗಾಂ ಅಧಿದೇಶನದಲ್ಲಿ ಮುತ್ತಿಗೆ ಕಾರ್ಯಕ್ರಮ ಇವುಗಳನ್ನು ಹಾಕುವ ಮುಖಾಂತರ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲಾಗಿದೆ. ಇದರ ಪ್ರತಿಫಲವಾಗಿ ಹಿಂದೆ ಜಾತಿ, ಜನಗಣತಿಯನ್ನು ಅಧರವಾಗಿಟ್ಟುಕೊಂಡು ಸದಾಶಿವ ಆಯೋಗವನ್ನು ಅಂದಿನ ಸರ್ಕಾರ ನೇಮಕ ಮಾಡಿತ್ತು. ಇದರ ವರದಿಯನ್ನು ಸಹ ಸರ್ಕಾರಕ್ಕೆ ನೀಡಿತು. ಆದರೆ ಹಲವು ವರ್ಷಗಳ ಕಾಲ ಇದನ್ನು ಜಾರಿಗೆ ತರದೆ ಸರ್ಕಾರಗಳು ನಿರ್ಲಕ್ಷ್ಯ ಮಾಡಿದವು. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸದಾಶಿವ ಆಯೋಗವನ್ನು ಜಾರಿ ಮಾಡುತ್ತೇವೆ. ಎಂದು ಸುಳ್ಳು ಭರವಸೆಗಳನ್ನು ಕೊಟ್ಟರೇ ವಿನಃ ಜಾರಿಗೊಳಿಸುವ ದೃಢ ನಿರ್ಧಾರವನ್ನು ಮಾಡಲಿಲ್ಲ. ಈ ಮೇಲ್ಕಂಡ ಅಸ್ಪರ್ಶ ಜಾತಿಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡವು.
ಹೋರಾಟ ರಾಜ್ಯಾದಾದ್ಯಂತ ತೀವ್ರಗೊಂಡ ನಂತರ ಸುಪ್ರೀಂ ಕೋರ್ಟ್ 2024ರ ಆಗಸ್ಟ್-1 ರಂದು ಐತಿಹಾಸಿಕವಾದಂತಹ ತೀರ್ಪನ್ನು ಪ್ರಕಟಿಸುವ ಮೂಲಕ ಬಳ ಮೀಸಲಾತಿಯನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂಬ ಮಹತ್ವದ ತೀರ್ಪನ್ನು ಪ್ರಕಟಿಸಿತು. ಈ ತೀರ್ಪು ಪ್ರಕಟವಾದ ನಂತರ ತೆಲಂಗಾಣ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ನಾವೇ ಮೊದಲು ತರುತ್ತೇವೆ ಎಂದು ಪ್ರಕಟಿಸಿದರು. ಹರಿಯಾಣ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಈ ಸರ್ಕಾರ ಒಳ ಮೀಸಲಾತಿ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಕಾಂಗ್ರೇಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಆಶ್ವಾಸನೆ ನೀಡಿತ್ತು. ಆದರೆ ಇಲ್ಲಿಯವರೆಗೂ ಕಾಂಗ್ರೇಸ್ ಸರ್ಕಾರ ಬದ್ಧತೆಯನ್ನು ತೋರದೇ ಇರುವುದು ದುರದೃಷ್ಟಕರ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಇನ್ನು ಹಲವು ಬಲಗೈ ನಾಯಕರು ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅಸಹನೆ ತೋರುಸತ್ತಿದ್ದಾರೆ ಎಂಬುದು ದೇಶ ಹಾಗೂ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿದೆ. ಅಲ್ಲದೇ ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿ ಬಾರಿಯು ದಲಿತ ಮುಖ್ಯಮಂತ್ರಿ ನಾವೇ ಎಂಬುದಾಗಿ ಸುದ್ದಿ ಮಾಡುತ್ತಿದ್ದಾರೆ. ನಿಜವಾದ ಅಸ್ಪರ್ಶ ಮಾದಿಗರನ್ನು ತನ್ನ ಸಹೋದರರು ಎಂದು ಎಂದೂ ಸಹ ಅಂದುಕೊಳ್ಳದ ಈ ಸಮುದಾಯದವರು ಮಾದಿಗರನ್ನು ಕಡೆಗಣಿಸುತ್ತಾ ಬಹುಪಾಲು ಸೌಲಭ್ಯಗಳ ಒಡೆಯರಾಗಿದ್ದಾರೆ. ಆದ ಕಾರಣ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಈ ಸಮುದಾಯದ ನಾಯಕರು ಬದ್ಧತೆ ತೋರದೇ ಇದ್ದಲ್ಲಿ ಮುಂದೆ ಮೀಸಲಾತಿ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದವರು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ, ಅಲ್ಲದೇ ದಲಿತರಿಗೆ ಬೇಕಾಗಿಲ್ಲ.
ದಲಿತ ಮುಖ್ಯಮಂತ್ರಿ ಪದವಿಗೆ ಮಾಡಿಗೆ ದುಹಾಸಭಾ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತವೆ.
ಅಲ್ಲದೇ ಒಳ ಮೀಸಲಾತಿ ಜಾರಿಯಾಗುವ ವರೆಗೂ ಸರ್ಕಾರದ ಉದ್ಯೋಗದ ಅಧಿಸೂಚನೆಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಹಾಗೂ ಎಸ್.ಇ.ಪಿ / ಟಿ.ಎಸ್.ಪಿ ಅನುದಾನವನ್ನು ಹಂಚಿಕೆ ಮಾಡದೇ ತಡೆಗಟ್ಟಬೇಕು ಹಾಗೂ ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಸಮಾಜದ ಶಾಸಕರು, ಸಚಿವರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಬೇಕು ನಿಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯದೇ ಇದ್ದಲ್ಲಿ ತಮ್ಮ ಸ್ಥಾನಗಳಲ್ಲಿ ರಾಜೀನಾಮೆ ಕೊಡುವ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕಾಗಿ ಮಾದಿಗ ಮಹಾಸಭಾ ಮುಖಂಡರುಗಳು ಪತ್ರಿಕಾ ಗೋಷ್ಟಿಯ ಮೂಲಕ ಒತ್ತಾಯಿಸಿದರು.